
14th December 2024
ವೃತ್ತಿಪರ ಸಮಾಜ ಕಾರ್ಯಕರ್ತರ ಬೇಡಿಕೆ ಮತ್ತು ಸಮಸ್ಯೆಗಳನ್ನು ಈಡೇರಿಸುವ ಬಗ್ಗೆ ಅಧಿವೇಶನದಲ್ಲಿ ಪ್ರಸ್ತಾಪಿಸುವಂತೆ ಗುರುಮಠಕಲ್ ಮತಕ್ಷೇತ್ರದ ಶಾಸಕರಿಗೆ ಜಿಲ್ಲಾ ಘಟಕ ಯಾದಗಿರಿ ವತಿಯಿಂದ ಮನವಿ
ಕರ್ನಾಟಕ ರಾಜ್ಯ ಪ್ರಪೋಷನಲ್ ಸೋಶಿಯಲ್ ವರ್ಕರ್ಸ್ ವೆಲ್ಫೇರ್ ಅಸೋಸಿಯೇಷನ್ ಯಾದಗಿರಿ ಜಿಲ್ಲಾ ಘಟಕ ದ ವತಿಯಿಂದ (MSW/FSW ) ಮಾಸ್ಟರ್ ಆಫ್ ಸೋಶಿಯಲ್ ವರ್ಕ್ ಸ್ನಾತಕೋತ್ತರ ಪದವಿಯನ್ನು ಎರಡು ವರ್ಷಗಳು ಮತ್ತು ಬ್ಯಾಚಲರ್ ಆಫ್ ಸೋಶಿಯಲ್ ವರ್ಕ್ ಸ್ನಾತಕ ಪದವಿಯನ್ನು ಮೂರು ವರ್ಷಗಳ ಕಾಲ ವಿದ್ಯಾಭ್ಯಾಸದ ಜೊತೆಗೆ ಕಾರ್ಯ ಕ್ಷೇತ್ರದಲ್ಲಿಯೂ ಸಮುದಾಯ ಅಭಿವೃದ್ಧಿ ಮನೋವೈದ್ಯಕೀಯ ಮಾನವ ಸಂಪನ್ಮೂಲ ಸೇರಿದಂತೆ ವಿವಿಧ ಇಲಾಖೆಗಳಲ್ಲಿ, ಕ್ಷೇತ್ರದಲ್ಲಿ ಸಾಮಾಜಿಕ ಕಾರ್ಯಕರ್ತರಾಗಿ, ಆಪ್ತ ಸಮಾಲೋಚಕರಾಗಿ, ಮಾನವೀಯ ಸಾಮಾಜಿಕ ಕಾರ್ಯಕರ್ತರಾಗಿ,ಆರೋಗ್ಯ ಇಲಾಖೆಯಲ್ಲಿ,ಕಾರ್ಖಾನೆಗಳಲ್ಲಿ ಮಾನವ ಸಂಪನ್ಮೂಲ ಅಧಿಕಾರಿಗಳಾಗಿ,ಶಿಕ್ಷಣ ಇಲಾಖೆಯಲ್ಲಿ, ಕಾನೂನು ಅಧಿಕಾರಿಗಳಾಗಿ ಕೂಡ ಕರ್ತವ್ಯವನ್ನು ಅತಿ ಕಡಿಮೆ ವೇತನ ತೆಗೊಂಡು ಸುಮಾರು 12 ರಿಂದ 15 ವರ್ಷಗಳಿಗಿಂತಲೂ ಹೆಚ್ಚು ವರ್ಷಗಳ ಕಾಲ ಗುತ್ತಿಗೆ ಹೊರಗುತ್ತಿಗೆ ಆಧಾರದ ಮೇಲೆ ಸೇವೆ ಸಲ್ಲಿಸುತ್ತಿದ್ದೇವೆ ಇವರನ್ನು ಖಾಯಂ ಮಾಡಿ,ವೇತನ ಪರಿಷ್ಕರಣೆ ಮಾಡುವುದರ ಜೊತೆಗೆ ನಮಗೆ ಮೀಸಲಿಟ್ಟಿರುವಂತಹ ಹುದ್ದೆಗಳಿಗೆ ಬೇರೆಯವರಿಗೆ ಅವಕಾಶ ನೀಡಲಾಗುತ್ತಿದೆ.ಆದ್ದರಿಂದ MSW /BSW ಮುಗಿಸಿ ಉದ್ಯೋಗವಿಲ್ಲದೆ ಕಚೇರಿ ಗಳಿಗೆ ಉದ್ಯೋಗಕ್ಕಾಗಿ ಅಲೆದಾಡುವಂತಾಗಿದೆ ,ಇರುವ ವೇತನವನ್ನು ಬೇರೆ ಸ್ನಾತ್ತಕೋತ್ತರ ಪದವೀಧರಗಿಂತಲೂ ಕಡಿಮೆ ವೇತನವನ್ನು ನಮಗೆ ನೀಡುತ್ತಿದ್ದಾರೆ. ಮತ್ತು ಸರ್ಕಾರೇತರ ಸಂಸ್ಥೆಗಳಲ್ಲಿ ನಡೆಯುತ್ತಿರುವ ಹಲ್ಲೆ, ದಬ್ಬಾಳಿಕೆ ,ನಿಗದಿತ ವೇತನ ಗಿಂತ ಕಡಿಮೆ ವೇತನ ನೀಡುತ್ತಿರುವುದು, ಸರ್ಕಾರದ ಜನಪರ ಯೋಜನೆಗಳಲ್ಲಿ ಮತ್ತು ಕಾರ್ಯಕ್ರಮಗಳಲ್ಲಿ MSW/BSW ಪದವೀಧರರಿಗೆ ಮೊದಲ ಆದ್ಯತೆ ನೀಡುವುದರ ಬಗ್ಗೆ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ಅಧಿವೇಶನ ದಲ್ಲಿ ವೃತ್ತಿಪರ ಸಮಾಜ ಕಾರ್ಯಕರ್ತರ ಬೇಡಿಕೆ ಮತ್ತು ಸಮಸ್ಯಗಳ ಬಗ್ಗೆ ಮತ್ತು ಹಕ್ಕೊತ್ತಾಯಗಳ ಬಗ್ಗೆ ಪ್ರಸ್ತಾಪಿಸುವಂತೆ ಶ್ರೀ ಶರಣಗೌಡ ಕಂದಕೂರ ಮಾನ್ಯ ಶಾಸಕರು ಗುರುಮಠಕಲ್ ವಿಧಾನಸಭಾ ಕ್ಷೇತ್ರ ಇವರಿಗೆ ಮನವಿ ಸಲ್ಲಿಸಲಾಯಿತು ಮನವಿ ಸ್ವೀಕರಿಸಿದ ಮಾನ್ಯ ಶಾಸಕರು ಸಕರಾತ್ಮಕವಾಗಿ ಸ್ಪಂದಿಸಿದರು ಮತ್ತು ಇದರ ಬಗ್ಗೆ ಸರಕಾರದ ಗಮನ ಸೆಳೆಯಲು ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸುವದಾಗಿ ಮತ್ತು ಸರಕಾರದ ಗಮನ ಸೆಳೆಯುತ್ತೇನೆ ಎಂದು ಭರವಸೆ ನೀಡಿದರು.
ಜಿಲ್ಲಾಧ್ಯಕ್ಷರಾದ ಮೌನೇಶ ಪಾಟೀಲ ಬೆಳಗೇರಾ ಹಾಗೂ ಗೌರವ ಅಧ್ಯಕ್ಷರು ಲಿಂಗರಾಜ ಪಡಶೆಟ್ಟಿ ಯವರ ನೇತೃತ್ವದಲ್ಲಿ ಪದಾಧಿಕಾರಿಗಳಾದ ಮಹೇಶಕುಮಾರ್ ನಾಟೇಕರ್,ಸೈಯದ್ ಪಾಷ ಚಾಮನಳ್ಳಿ,ವೀರರೆಡ್ಡಿ ಗಡ್ಡೆಸುಗೂರ್ ,ಬಸವರಾಜ ಅಮ್ಮಪುರ,ತಿಮ್ಮಣ್ಣ ನಾಯಕ,ಸೂರ್ಯಕಾಂತ ಕೂಲೂರ್ ,ಶ್ರೀದೇವಿ ಬಂದಳ್ಳಿ,
ಬೇಬಿ ರಾಥೋಡ್,ಶ್ವೇತ ನಾಯ್ಕ,ಶಾಂತ ಬೆನಕನಳ್ಳಿ ಇವರಿಂದ ಮನವಿ ಸಲ್ಲಿಸಿದರು
ಸರ್ಕಾರದ ಯೋಜನೆಗಳ ಯಶಸ್ಸಿಗೆ ಪ್ರಾಮಾಣಿಕತೆ ಅತ್ಯವಶ್ಯ. ಮುಸಲ್ಮಾರಿ ಕಾಂಕ್ರೆಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿದ ಅಮರನಾಥ ಜಾರಕೀಹೊಳಿ ಅಭಿಮತ.
ಕಾರ್ಯಸಿದ್ಧಿ ಆಂಜನೇಯನಿಗೆ ಕೊಳವೆ ಬಾವಿ. ದಾನಿ ದಯಾನಂದ ಪಾಟೀಲ ಕಾರ್ಯಕ್ಕೆ ವಿನಯ ನಾವಲಗಟ್ಟಿ ಶ್ಲ್ಯಾಘನೆ.
ಪ.ಜಾತಿ,ಪಂಗಡದ ಅಭಿವೃದ್ಧಿಗೆ ಇಟ್ಟ ಹಣ ದರ್ಬಳಿಕೆ ಖಂಡಿಸಿ ಮಾ.೪ ರಂದು ಬಿಜೆಪಿ ಪ್ರತಿಭಟನೆ